ಬಜ್ಜೋಡಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಇನ್ಫೆಂಟ್ ಮೇರಿ ದೇವಾಲಯದ ಉದ್ಘಾಟನೆ 2015 ಜನವರಿ 2 ರಂದು ನಡೆಯಿತು.
ಪೂರ್ವಾಹ್ನ 9.00 ಗಂಟೆಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜರವರು, ಕಾರ್ಮೆಲಾೈಟ್ ಸಭೆಯ ಕರ್ನಾಟಕ-ಗೋವಾ ಪ್ರಾಂತ್ಯದ ಪೆÇ್ರವಿನ್ಸಿಯಲ್ ವಂ.ಚಾಲ್ರ್ಸ್ ಸೆರಾವೊ, ಬೆಂದೂರ್ ಚರ್ಚ್‍ನ ಧರ್ಮಗುರು ವಂ| ಆಂಟನಿ ಸೆರಾವೊ, ಕಾರ್ಮೆಲ್ ಹಿಲ್‍ನ ಮುಖ್ಯಸ್ಥರಾದ ವಂ| ಜ್ಯೋ ತಾವ್ರೋ, ವಂ| ಅರ್ಚಿಬಲ್ದ್ ಗೊನ್ಸಾಲ್ವಿಸ್, ನೂರಾರು ಧರ್ಮಗುರುಗಳು, ಧರ್ಮಭಗಿನಿಯರು, ರೆಲಿಜಿಯೊಸ್ ಎಪಿಸ್ಕೊಪಲ್ ಧರ್ಮಗುರುಗಳು ವಂ| ಪಿಯುಸ್ ಜೇಮ್ಸ್ ಡಿಸೋಜಾ, ಕಾಂಟ್ರ್ಯಾಕ್ಟರ್ ಶ್ರೀ ಲ್ಯಾನ್ಸಿ ಮಸ್ಕರೇನ್ಹಸ್, ಇಂಜಿನಿಯರ್ ಶ್ರೀ ಜಾರ್ಜ್, ಆರ್ಕಿಟೆಕ್ಟ್ ಶ್ರೀ ಲಾರೆನ್ಸ್ ಕುಟಿನ್ಹಾ ಮತ್ತಿತರ ಗಣ್ಯರು ಮತ್ತು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ದೇವಾಲಯವನ್ನು ಉದ್ಗಾಟಿಸಿದರು. ನಂತರ ಬಲಿಪೂಜೆಯ ವೇಳೆ ದೇವಾಲಯದ ಕಟ್ಟಡವನ್ನು ಆಶೀರ್ವದಿಸಲಾಯಿತು. ಈ ದೇವಾಲಯ ಬಾಲ ಮರಿಯಮ್ಮ ಅವರಿಗೆ ಸಮರ್ಪಿಸಲಾಗಿದೆ.
Photos by Stanly Bantwal
ಕರಾವಳಿ ಕಥೋಲಿಕರು ಸೆಪ್ಟೆಂಬರ್ 8 ಕನ್ಯಾ ಮರಿಯಮ್ಮನವರ ಜನ್ಮದಿನದಂದು ಹೊಸತೆನೆಯ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸುತ್ತಾರೆ. ಈ ಮಾತೆಯ ಮೂಲಕ ಬೇಡಿಕೆಗಳು ನೆರವೇರುತ್ತವೆ ಮಾತ್ರವಲ್ಲದೆ ಪವಾಡಗಳೂ ನಡೆಯುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಅನೇಕ ಪವಾಡಗಳಿಗೆ ಸಾಕ್ಷಿಯಾಗಿರುವ ‘ಬಂಬಿನಾ ಮೇರಿ’ ಎಂದು ಕರೆಯಲ್ಪಡುವ ಪವಾಡ ಮೂರ್ತಿಯನ್ನು ಈ ಚರ್ಚ್‍ನಲ್ಲಿ ಪ್ರತಿಷ್ಠಾಪಿಸಲಾಗಿದೆ.
ಈ ದೇವಾಲಯವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜರವರ ವಿನಂತಿ ಮೇರೆಗೆ ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದ ಕಾರ್ಮೆಲ್ ಸಭೆಯ ಧರ್ಮಗುರುಗಳ ಸುಪರ್ದಿಗೆ ನೀಡಿ ಕ್ರೈಸ್ತಬಾಂದವರ ಆದ್ಯತ್ಮಿಕ ಅಗ್ತ್ಯತೆಗಳಿಗೆ ಸ್ಪಂದಿಸುವಂತೆ ಕರೆನೀಡಿದ್ದಾರೆ. ವಂದನೀಯ ಮೆಲ್ವಿನ್ ಡಿ’ಕುನ್ಹಾ ಅವರನ್ನು ಪ್ರಥಮ ಧರ್ಮಗುರುವಾಗಿ ನೇಮಿಸಲಾಗಿದೆ. ಬಲಿಪೂಜೆಯ ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾಂಟ್ರ್ಯಾಕ್ಟರ್ ಶ್ರೀ ಲ್ಯಾನ್ಸಿ ಮಸ್ಕರೇನ್ಹಸ್, ಇಂಜಿನಿಯರ್ ಶ್ರೀ ಜಾರ್ಜ್, ಆರ್ಕಿಟೆಕ್ಟ್ ಶ್ರೀ ಲಾರೆನ್ಸ್ ಕುಟಿನ್ಹಾ ಮತ್ತಿತರ ದಾನಿಗಳನ್ನು ಸನ್ಮಾನಿಸಲಾಯಿತು. ಸ್ಥಳೀಯ ಕಾರ್ಪರೇಟರ್ ಶ್ರೀ ಕೇಶವ ಎಂ. ರವರು ಉಪಸ್ಥಿತರಿದ್ದರು.
More photos will be uploaded later