ಪತ್ರಿಕಾ ಪ್ರಕಟಣೆ

 

ಬಜ್ಜೋಡಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಇನ್ಫೆಂಟ್ ಮೇರಿ ದೇವಾಲಯದ ಉದ್ಘಾಟನೆ 2015 ಜನವರಿ 2 ರಂದು ನಡೆಯಲಿದೆ.

ಪೂರ್ವಾಹ್ನ 9.00 ಗಂಟೆಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜರವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಾರ್ಮೆಲಾೈಟ್ ಸಭೆಯ ಕರ್ನಾಟಕ-ಗೋವಾ ಪ್ರಾಂತ್ಯದ ಪೆÇ್ರವಿನ್ಸಿಯಲ್ ವಂ.ಫಾ.ಚಾಲ್ರ್ಸ್ ಸೆರಾವೊ, ಬೆಂದೂರ್ ಚರ್ಚ್‍ನ ಧರ್ಮಗುರು ವಂ| ಫಾ| ಆಂಟನಿ ಸೆರಾವೊ, ಕಾರ್ಮೆಲ್ ಹಿಲ್‍ನ ಮುಖ್ಯಸ್ಥರಾದ ವಂ| ಫಾ| ಜ್ಯೋ ತಾವ್ರೋ, ನೂರಾರು ಧರ್ಮಗುರುಗಳು, ಧರ್ಮಭಗಿನಿಯರು, ಕೇಂದ್ರದ ಮಾಜಿ ಸಚಿವರಾದ ಶ್ರೀ ಆಸ್ಕರ್ ಫೆರ್ನಾಂಡಿಸ್, ಶಾಸಕರಾದ ಶ್ರೀ ಜೆ.ಆರ್. ಲೋಬೊ, ಶ್ರೀ ಐವನ್ ಡಿ’ಸೋಜ, ರೆಲಿಜಿಯೊಸ್ ಎಪಿಸ್ಕೊಪಲ್ ಧರ್ಮಗುರುಗಳು ವಂ| ಫಾ| ಪಿಯುಸ್ ಜೇಮ್ಸ್ ಡಿಸೋಜಾ, ಕಾಂಟ್ರ್ಯಾಕ್ಟರ್ ಶ್ರೀ ಲ್ಯಾನ್ಸಿ ಮಸ್ಕರೇನ್ಹಸ್,  ಇಂಜಿನಿಯರ್ ಶ್ರೀ ಜಾರ್ಜ್, ಆರ್ಕಿಟೆಕ್ಟ್ ಶ್ರೀ ಲಾರೆನ್ಸ್ ಕುಟಿನ್ಹಾ ಮತ್ತಿತರ ಗಣ್ಯರು ಮತ್ತು ಸಾವಿರಾರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನೂತನ ಚರ್ಚ್ ಕಟ್ಟಡ ನಿರ್ಮಾಣ ರೋಮನ್-ಗೋಥಿಕ್ ಶೈಲಿಯಲ್ಲಿ ಕಟ್ಟಲಾಗಿದೆ. ಪ್ರಾರ್ಥನಾಲಯ ಹಾಗೂ ಬಾಲ್ಕನಿಯಲ್ಲಿ ಸುಮಾರು 800 ಭಕ್ತಾದಿಗಳಿಗೆ ಆಸನ ವ್ಯವಸ್ಥೆಯಿದೆ. 4 ಅಂತಸ್ತು ಹೊಂದಿರುವ ಈ ಕಟ್ಟಡ ಬೃಹತ್ ಸಭಾಂಗಣ, ಕಿರು ಸಭಾಂಗಣ, ಧಾರ್ಮಿಕ ಶಿಕ್ಷಣ ಬೋಧನಾ ಕೊಠಡಿಗಳು, ಚರ್ಚ್ ಕಚೇರಿ, ಧರ್ಮಗುರುಗಳ ವಸತಿಗೃಹವನ್ನು ಹೊಂದಿದೆ. ತಳ ಅಂತಸ್ತನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗಾಗಿ ಮೀಸಲಿಡಲಾಗಿದೆ.

 


ಬಾಲ್ಕನಿಯ ಗ್ರಿಲ್ಸ್‍ಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿದ ಜಪಮಾಲೆಯ ಚಿತ್ರಣಗಳು, ಪ್ರವೇಶದ್ವಾರದ ಮೇಲೆ ಮೂಡಿಬಂದ ಪವಿತ್ರ ಕುಟುಂಬದ ಮನಮೋಹಕ ಕೆತ್ತನೆ ಹಾಗೂ ಇತರ ಕಲಾತ್ಮಕ ಕೆತ್ತನೆಗಳು ಭಕ್ತಿ-ಭಾವ ಮೂಡಿಸುವಂತಿದ್ದು, ಭಕ್ತಾದಿಗಳನ್ನು ಆಕರ್ಷಿಸುತ್ತಿವೆ.

ಈ ಚರ್ಚ್ ಇನ್ಫೆಂಟ್ ಮೇರಿ ಅವರಿಗೆ ಸಮರ್ಪಿಸಲಾಗಿದೆ. ಕರಾವಳಿ ಕೆಥೊಲಿಕರು ಸಪ್ಟೆಂಬರ್ 8, ಕನ್ಯಾ ಮರಿಯಮ್ಮನವರ ಜನ್ಮದಿನದಂದು ಹೊಸತೆನೆಯ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಈ ಮಾತೆಯ ಮೂಲಕ ಬೇಡಿಕೆಗಳು ನೆರವೇರುತ್ತವೆ ಮಾತ್ರವಲ್ಲದೇ ಪವಾಡಗಳೂ ನಡೆಯುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಅನೇಕ ಪವಾಡಗಳಿಗೆ ಸಾಕ್ಷಿಯಾಗಿರುವ ‘ಬಂಬಿನಾ ಮೇರಿ’ ಎಂದು ಕರೆಯಲ್ಪಡುವ ಪವಾಡ ಮೂರ್ತಿಯನ್ನು ಈ ಚರ್ಚ್‍ನಲ್ಲಿ ಪ್ರತಿಷ್ಠಾಪಿಸಲಾಗಿದೆ.


1914 ರಲ್ಲಿ ಸ್ಥಾಪನೆಯಾದ ಬೆಂದೂರಿನ ಸಂತ ಸೆಬೆಸ್ತಿಯನ್ನರ ಚರ್ಚ್‍ಗೆ 100 ವರುಷಗಳು ಸಂದಿವೆ. ಕಳೆದ 100 ವರ್ಷಗಳಲ್ಲಿ ಈ ಕ್ರೈಸ್ತ ದೇವಾಲಯದ ಕುಟುಂಬಗಳ ಸಂಖ್ಯೆ ವಿಸ್ತಾರಗೊಂಡಿದೆ. ‘ಬಜ್ಜೋಡಿ’ ಪರಿಸರದ ಜನÀರ ಧಾರ್ಮಿಕ ಅವಶ್ಯಕತೆಗೆ ಅನುಕೂಲವಾಗುವಂತೆ ಈ ದೇವಾಲಯ ನಿರ್ಮಿಸಲಾಗಿದೆ. ಈ ನೂತನ ಚರ್ಚ್ 6 ವಾಳೆಗಳ 327 ಕೆಥೊಲಿಕ್ ಕುಟುಂಬಗಳನ್ನು ಒಳಗೊಂಡಿದೆ.


ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜರವರ ವಿನಂತಿ ಮೇರೆಗೆ ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದ ‘ಕಾರ್ಮೆಲೈಟ್’ ಧರ್ಮಗುರುಗಳು ಈ ಚರ್ಚ್ ಕಟ್ಟಡ ನಿರ್ಮಾಣದ ಉಸ್ತುವಾರಿಯನ್ನು ವಹಿಸಿದರು. ವಂದನೀಯ ಮೆಲ್ವಿನ್ ಡಿ’ಕುನ್ಹಾ ಅವರ ಸತತ ಪರಿಶ್ರಮ ಹಾಗೂ ಮೇಲ್ವಿಚಾರಣೆಯಡಿ ಉದಾರ ಮನಸ್ಸಿನ ದಾನಿಗಳ ಧನಸಹಾಯದಿಂದ ಈ ಭವ್ಯ ದೇವಾಲಯ ನಿರ್ಮಾಣ ಸಾಧ್ಯವಾಗಿದೆ.



Press Release

 

Newly-built Infant Mary church at Bajjodi to be inaugurated on Jan 2

Fr Charles Serrao, the provincial superior of the Carmelites of Karnataka-Goa province, will inaugurate the newly-built Infant Mary Church at Bajjodi in Mangaluru on January 2, 2015.

The holy Eucharist will be celebrated and the blessing of the new church will be done by Dr Aloysius Paul D'Souza, the bishop of Mangaluru.
A felicitation function will be held after the holy mass followed by lunch.

Fr Joe Tauro, the superior of St Joseph's Monastery, Carmel hill, Fr Antony Serrao, parish priest of St Sebastian Church, Bendore and Fr Melvin D'Cunha, presently the priest in charge of Infant Mary Church, Mr. Oscar Fernandes (Honorable Member of Parliament), Mr. J.R. Lobo (MLA), Mr. Ivan D’Souza (MLC), Rev. Fr. Pius James D’Souza (Episcopal Vicar for Religious), Mr. Lancy Mascarenhas (Contractor), Mr. George (Engineer), Mr. Lawrence Cutinha (Architect) and other dignitaries will be present with clergymen and devotees during the inauguration.

A new parish in the diocese
Infant Mary Church, Bajjodi which has been part of the Bendore parish so far will become a new parish after the inauguration of the church.  The Carmelite fathers from Infant Jesus Shrine, Carmel Hill always helped them in their spiritual needs as Bendore church was very far for them to visit. Later the Carmelites were entrusted to build a new church when the need arose.

Fr Nelson Pinto took the initiative and helped in the important matters to start the parish. Then Fr Melvin D'Cunha took over from him to begin the construction of the church. Fr Melvin is being assisted by Fr Deep Fernandes. The new independent parish has 6 wards with 327 families.

About the new church
It took three years to complete the church building. The style of architecture is Roman gothic. The church building has four floors which is not a common thing in the region.The building also has a hall and a mini hall.There are sufficient rooms for Sunday catechism. The prayer hall in the church can accommodate 600 people inside and 200 people in the balcony.

The church has a magnificent front door with the picture of Holy Family. Other doors have the pictures of saints. The grills in the balcony depict the 20 mysteries of the Rosary.


 

 

 

Home | About Us | Sitemap | Contact

Copyright © 2013 - www.infantmarychurch.org. Powered by eCreators

Contact Us

INFANT MARY CHURCH
Bajjodi, Bikarnakatte,
Mangalore - 575 005, India

Contact : +91 82968 23398